Saturday, August 8, 2009

ಮಗುವಿನ ಪ್ರೀತಿ...ಆಟ...ಚಿನ್ನಾಟ...


ಗೆಳೆಯ ಪ್ರಮೋದ್ ನಿನ್ನೆ ಮತ್ತೆ ಫೋನಾಯಿಸಿ, ಕೆಲವು ಅಪರೂಪದ ಪದ್ಯಗಳನ್ನು ಓದಿದ....ಇಗೋ ಇಲ್ಲಿವೆ...


೧. ಮಗುವಿನೊಡಲಲ್ಲಿ
ಮಮತೆ ಮಾತಿನ
ಒರತೆಗಳಿವೆ
ದೊಡ್ದವರೂಡಲಲ್ಲಿ
ಕಲಹದ ಕಡಲುಗಳೇ
ತುಂಬಿವೆ...


೨. ಮಗುವಿನ
ಭಾಷೆ
ತಾಯಿಗೆ ಮಾತ್ರ
ತಿಳಿಯುತ್ತೆ
ಯಾಕೆಂದರೆ
ತಾಯಿ ಮಗುವಿನ
ಭಾಷೆ
ಪ್ರೀತಿಯಾಗಿರುತ್ತೆ..


೩. ಮಗು
ಮುತ್ತು ಕೊಟ್ಟವರೊಂದಿಗೆ
ಪ್ರೀತಿಯಿಂದ
ಚಿನ್ನಾಟವಾಡುತ್ತದೆ
ನಾವೋ
ಕೆಲವರ ಬದುಕಿನೊಂದಿಗೆ
ಚಲ್ಲಾಟವಾಡುತ್ತೇವೆ...


೪. ಮಗು
ಆಟ ಮಾತ್ರ ಆಡುತ್ತದೆ
ನಾವು
ನಾಟಕವನ್ನೂ ಆಡುತ್ತೇವೆ...


ನನ್ನ ಬ್ಲಾಗ್ನಲ್ಲಿ ಈ ಪದ್ಯಗಳನ್ನು ಹಾಕಿರುವುದಾಗಿ ಪ್ರಮೋದನಿಗೆ ತಿಳಿಸಿದಾಗ..ಅವನು ಒಂದು ಚುಟುಕಾದ ಸಂದೇಶವನ್ನು ತನ್ನ ಮೊಬೈಲ್ ಮೂಲಕ ಕಳುಹಿಸಿದ....


"ಗೆಳೆಯ ನಿನ್ನ ಪ್ರೀತಿಗೆ ಅಭಿನಂದನೆ...ನಿನ್ನ ಒಡನಾಟ ಹೀಗೆ ಇರಲಿ..ಕವಿತೆ ಕಥೆಗಳ ಬರೆಸಲಿ..."


ನಾನದಕ್ಕೆ ತಕ್ಷಣ ಪ್ರತಿಕ್ರಿಯಿಸಿದೆ...


"ಅದಕ್ಕೆ ಇರಬೇಕು ಕೆ.ಎಸ್. ನರಸಿಂಹಸ್ವಾಮಿ ಅವರು ಬರೆದದ್ದು...ನಿನ್ನ ಪ್ರೀತಿಗೆ ಅದರ ರೀತಿಗೆ ಕಣ್ಣ ಹನಿಗಳೇ ಕಾಣಿಕೆ...." ಎಂದು...


4 comments:

  1. ತುಂಬಾ ಚೆನ್ನಾಗಿದೆ ನಿಮ್ಮ ಕವನ.....

    ReplyDelete
  2. ಕವನ ಚೆನ್ನಾಗಿ ಮೂಡಿ ಬಂದಿದೆ ... Socrates ಹಳಿದ್ದು ನೆನಪಾಗುತ್ತೆದೆ "An honest man is always a child"

    ReplyDelete
  3. ಮತ್ತೊಮ್ಮೆ ಓದಿದೆ.
    "ಆಗಿ ಬಿಡು ಮಗುವಾಗಿ ಬಿಡು ನಿ ಚಿಂತೆ ಬೆಳೆದಂತೆ ..." ಎಂಬ ಹಂಸಲೇಖರ ಹಾಡು ನೆನಪಿಸಿತು.

    ReplyDelete