Saturday, July 25, 2009

ಗಿನ್ನಿಸ್ ದಾಖಲೆ ಪೋರನ ತುಂಟಾಟಗಳು....



೧೯೮೩-೮೪ ರ ಮಾತುಗಳಿವು...ನಾನಾಗ ೮ ನೆ ವರ್ಗದಲ್ಲಿ ಓದುತ್ತಿದ್ದೆ..ಧಾರವಾಡದ ಕರ್ನಾಟಕ ಹೈಸ್ಕೂಲಿನಲ್ಲಿ ನನ್ನ ಶಾಲಾದಿನಗಳನ್ನು ಕಳೆದೆ...ಆ ದಿನಗಳಲ್ಲಿ ನಾವು ಧಾರವಾಡದ ಹೊಸಯೇಲ್ಲಾಪುರ್ ಏರಿಯಾದಲ್ಲಿ ವಾಸವಾಗಿದ್ದೆವು...ಹೊಸಯೇಲ್ಲಾಪುರದ ವೆಂಕಟೇಶ್ವರ ದೇವಸ್ತಾನದ ಎದುರಿನ ಒಂದು ಮನೆಯಲ್ಲಿ ನಾವು ಬಾಡಿಗೆಗಿದ್ದೆವು... ಆ ವೆಂಕಟೇಶ್ವರ ದೇವಸ್ತಾನದ ಪಕ್ಕದಲ್ಲಿಯೇ ಮಾಧವ ಗುಡಿ ಅವರ ಮನೆ...ನಮ್ಮ ಮನೆಯಿಂದ ಅವರ ಮನೆಗೆ ನಡೆದು ಕೊಂಡು ಹೋದರೆ ೧೦ ಸೆಕೆಂಡುಗಳ ಅಂತರ... ಅವರ ಮನೆಯಲ್ಲಿ ಯಾವಾಗಲು ಸಂಗೀತದ ವಾತಾವರಣ ಇರುತ್ತಿತ್ತಾದ್ದರಿಂದ ನಾನು ಮೇಲಿಂದ ಮೇಲೆ ಅವರ ಮನೆಗೆ ಹೋಗಿ ಅವರ ರಿಯಾಜ್ ಗಳನ್ನು ಕೇಳುತ್ತಾ ಕುಳಿತುಬಿಡುತ್ತಿದ್ದೆ..


ಶ್ರೀ. ಮಾಧವ ಗುಡಿ ಅವರ ಮಗ ಪ್ರಸನ್ನ ಗುಡಿ ಆಗ ಬಹುಶಃ ೪-೫ ವರ್ಷದವನಿರಬೇಕು....ಇಂದು ಅವನು ಗಿನ್ನಿಸ್ ದಾಖಲೆ ಮಾಡಿದ್ದಾನೆಂದರೆ ಅದನ್ನು ನಂಬಲು ಸಾಧ್ಯವೇ ಇಲ್ಲ...ಅವನಿಗೆ ಸಂಗೀತ ಒಲಿಯುತ್ತದೆ ಎಂಬ ವಿಷಯವೇ ಒಂದು ಹಂತದಲ್ಲಿ ಅಪಥ್ಯವಾಗುತ್ತದೆ...ಅಂತಹ ತುಂಟ ಅವನು...ಕಿಲಾಡಿತನ , ಕಿಡಿಗೆಡಿತನಕ್ಕೆ ಇನ್ನೊಂದು ಹೆಸರೇ ಪ್ರಸನ್ನ..ಅವನನ್ನು ನಾವೆಲ್ಲ ಪ್ರೀತಿಯಿಂದ "ಪರಶ್ಯಾ" ಎಂದು ಕರೆಯುತ್ತಿದ್ದೆವು...
ಧಾರವಾಡದ ಹೊಸಯೇಲಾಪುರದಲ್ಲಿ ನಿಮಗೆ ಅನೇಕ ಪುರಾತನ ಕೆರೆ ಬಾವಿಗಳು ಸಿಗುತ್ತವೆ....ಅಂತಹುದರಲ್ಲಿ "ನುಚ್ಚಂಬಲಿ ಬಾವಿ" ಎನ್ನುವುದೊಂದಿದೆ... ದಿನಾಲು ಬೆಳಿಗ್ಗೆ ನಾವಲ್ಲಿಗೆ ಈಜಲು ಹೋಗುತ್ತಿದ್ದೆವು...ಈ ಪ್ರಸನ್ನ ಆಗ ಪ್ರಾಯಶಃ ೪-೫ ವರ್ಷ ವಯಸಿನವನಾಗಿರಬೇಕು...ಬೆಳಿಗ್ಗೆ ನಮಗಿಂತಲೂ ಮುಂಚೆ ಆ ಬಾವಿಗೆ ಹೋಗಿ...ಮೇಲಿನಿಂದ ನೀರಿನಲ್ಲಿ ಜಿಗಿದು...ನನ್ನನ್ನು ಉಳಸ್ರಿ..ಅಂತ ಬೊಬ್ಬೆ ಹಾಕಿ...ದೊಡ್ಡ ರಂಪ ಮಾಡಿಬಿಟ್ಟಿದ್ದ... ತಿಳಿದದ್ದೇ ತಡ ಮಾಧವ ಗುಡಿ ಅವರು ಬಾವಿಯ ವರೆಗೆ ಬಂದು ಪರಶ್ಯಾನನ್ನು ರಸ್ತೆ ಗುಂಟ ಹೊಡೆಯುತ ಮನೆಗೆ ಕರೆದುಕೊಂಡು ಹೋಗಿದ್ದರು....

ಮತ್ತೊಂದು ಸಾರಿ ಹೀಗೆಯೇ ಆಗಿತ್ತು....ಅವರ ಮನೆಯ ಪಕ್ಕದಲ್ಲಿ ಒಂದು ಬೀದಿ ನಾಯಿ ಮಲಗಿತ್ತು...ಮದ್ಯಾನ್ಹದ ಸಮಯ...ಪರಶ್ಯಾ ಮನೆಯಲ್ಲಿ ಹೊಟ್ಟೆತುಂಬ ಊಟ ಮಾಡಿ ಹೊರಗೆ ಬಂದು ನೋಡಿದ್ದಾನೆ... ಅಲ್ಲಿ ನಾಯಿ ಮಲಗಿದೆ..ತಕ್ಷಣ ಮನೆಯ ಒಳಕ್ಕೆ ಹೊಕ್ಕು ಒಂದು ರೊಟ್ತಿಯನು ತಂದು ಅದರ ಮುಂದೆ ಹಾಕಿದ್ದಾನೆ....ನಾಯಿ ಗಾಢವಾದ ನಿದ್ರೆಯಲ್ಲಿದೆ...ರೊಟ್ಟಿಯ ಹತ್ತಿರ ಅದು ನೋಡಿಲ್ಲ...ಪರಶ್ಯಾನಿಗೆ ಸಿಟ್ಟು ಬಂದಿದೆ...ಮಲಗಿದ ನಾಯಿಯ ಬಾಯಿಯನ್ನು ತೆರೆದು ಅದರ ಬಾಯಲ್ಲಿ ರೊಟ್ಟಿಯನ್ನು ಇಡುವ ಪ್ರಯತ್ನ ಮಾಡಿದ್ದಾನೆ...ಸಿಟ್ಟಿಗೆದ್ದ ನಾಯಿ ಇವನನ್ನು ಕಂಡ ಕಂಡಲ್ಲಿ ಕಚ್ಚಿದೆ...ಇವನ ಪರಿಸ್ಥಿತಿ ಹೇಳತೀರದು...ತಕ್ಷಣ ಅವನಿಗೆ ಚಿಕಿತ್ಸೆ ಕೊಡಿಸಲೆಂದು ನಾವೆಲ್ಲ ಅವರ ತಂದೆಗೆ ಈ ವಿಷಯ ತಿಳಿಸಿದರೆ..ಅವರು ಬಂದವರೇ ತತ್ಕ್ಷಣಕ್ಕೆ ಏನನ್ನು ಯೋಚಿಸದೆ ಪರಶ್ಯಾನನ್ನು ಮನಸ್ಸಿಗೆ ಬಂದಂತೆ ಥಳಸಿದ್ದಾರೆ....ನಂತರ ಡಾಕ್ಟರ್ ಹತ್ತಿರ ಕರೆದುಕೊಂಡು ಹೋಗಿ ಹೊಕ್ಕಳಿನ ಸುತ್ತ ೧೨ ಇಂಜಕ್ಷನ್ ಕೊಡಿಸಿದ್ದಾಯಿತು ....

ಹೀಗೆ ಅನೇಕ ತರಹದ ತುಂಟಾಟ...ತರಲೆ ಕೆಲಸಗಳಿಗೆ ಹೆಸರುವಾಸಿಯಾಗಿದ್ದ ಪ್ರಸನ್ನನಿಗೆ ಸಂಗೀತ ಒಲಿದಿದೆ ಎಂದು ನಂಬಲು ನನಗೆ ಸಾಧ್ಯವೇ ಆಗಲಿಲ್ಲ....ಅವನು ಗಿನ್ನಿಸ್ ದಾಖಲೆಗಾಗಿ ಹಾಡುವ ದಿನ ನಾನು ಧಾರವಾಡದಲ್ಲಿದ್ದೆ...ರಾತ್ರಿ ಎರಡು ಗಂಟೆಯ ತನಕ ಕುಳಿತು ಅವನ ಹಾಡುಗಳನ್ನು ಕೇಳಿದೆ...ನಿಜಕ್ಕೂ ಅದ್ಭುತವಾಗಿ ಹಾಡಬಲ್ಲ ಗಾಯಕ ಆತ...ಪರಿಶ್ರಮ ಪಟ್ಟರೆ ಇನ್ನು ಮೇಲಕ್ಕೆ ಏರುವ ಸಾಮರ್ಥ್ಯವಿರುವ ಪ್ರತಿಭಾವಂತ...ಅವನ ನಮ್ಮ ಸಂಪರ್ಕ ತಪ್ಪಿ ಈಗ ಏನಿಲ್ಲವೆಂದರೂ ೨೦ ವರ್ಷಗಳೇ ಕಳೆದಿವೆ... ಹಳೆಯ ನೆನಪುಗಳೇ ಹಾಗೆ...ಮಾಯವಾಗುವ ಗಾಯಕ್ಕೆ ಮತ್ತೆ ತುರಿಕೆ ಬಿಟ್ಟಂತೆ..... All the best Prasanna...Keep up the good work....

2 comments:

  1. ಯಾಕ್ರಿ ಕುಲ್ಕರ್ಣಿ ಸಾಹೆಬ್ರ....... ಬರೀರಿ ಯಾಕ್ ಹಿಂಗಾ ಸುಕಾ ಸಮ್ನೆ ನಿಲ್ಲಿಸಿದ್ರೆ.........? ಬ್ಯುಜಿ ಅದಿರೇನ್ರಿ........? ಚೆಂದ್ ಬರೇತೀರಿ ನೀವು..... ನಿಮ್ದು ಸ್ವಲ್ಪ ಅಭಿಮಾನಿ ನಾನು, ನಾನು ಹೊಸಪೇಟೆ ಹುಡುಗ,ನಿಮ್ಮ ನಾಟಕಗಳ್ನ ಹೊಸಪೇಟ್ಯಾಗ ನೋಡಿನಿ. ಓದಿದ್ದು ಮೈಸೂರಿನ್ಯಾಗ ಪತ್ರಿಕೋದ್ಯಮ ಬಿ.ಎ ಮತ್ತು ಎಮ್.ಎ, ಒಂದು ಸ್ವಲ್ಪ ರಂಗಭೂಮಿ ಹಿನ್ನಲೆ ಓದುವ ದಿನಗಳಲ್ಲಿ, ಈಗ ಜೀ ಕನ್ನಡದಾಗ ನಿರ್ದೇಶಕನಾಗಿ ರಿಯಾಲಿಟಿ ಕಾರ್ಯಕ್ರಮಗಳನ್ನ ಮಾಡ್ತೀನಿ.

    ಜಡಿಯಪ್ಪ

    ReplyDelete
  2. ನಾನು ಧಾರವಾಡದವನೆ , ನಾನು ಪ್ರಸನ್ನ ಆಟ ಆಡೇವಿ ನನಗು ನಂಬಲಿಕ್ಕೆ ಅಗವಲ್ತು. ತುಂಬಾ ತುಂಟ ಇದ್ದ. ಅವನ ಫೋಟೋ ನೋಡಿದ ಮೇಲೆ confirm ಆಯಿತು. All the best prasanna. ನೀವು ಚೆನ್ನಾಗಿ ಬರಿತಿರಿ.ಹೀಗೆ ಬರೀರಿ. ನನಗೆ ಧಾರವಾಡ ಬಾಷ ಅಂದ್ರ ಬಾಳ ಚಲೋ ಅನ್ನಿಸ್ತದ.

    ReplyDelete